ಗಂಗಾವತಿ ಬಿಇಓ ಕಚೇರಿ ಅಧೀಕ್ಷಕ ಮಂಜುನಾಥ ಆತ್ಮಹತ್ಯೆ: ಬಿಇಓ, ಮ್ಯಾನೇಜರ್ ಮತ್ತು ಸುಪರಟೆಂಡೆಂಟ್ ಅವರ ಕಿರುಕುಳ- ಡೆತ್ ನೋಟ್ ನಲ್ಲಿ ನಮೂದು-ಕಾಲುವೆಯಲ್ಲಿ ಹಾರಿ ಸಾವು: ಬಾಡಿ ಹುಡುಕಾಟ
ಇವರಿಂದ: ಗಿರೀಶ ಕುಲಕರ್ಣೀ ಕುಲಕರ್ಣೀ

ಗಂಗಾವತಿ.(ಸಮರ್ಥವಾಣಿ ನ್ಯೂಜ್)
ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ಅಧೀಕ್ಷ ಮಂಜುನಾಥ ಹೆಚ್.ಜಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಢೆದಿದೆ.
ಸೋಮವಾರ ಬೆಳೆಗ್ಗೆ ವಡ್ಡರಹಟ್ಟಿ ಆರಾಳ್ ಮದ್ಯ ಬರುವ ಎಡದಂಡೆ ಕಾಲುವೆಯಲ್ಲಿ ಹಾರಿ ಜೀವ ಕಳೆದುಕೊಂಡಿದ್ದಾನೆ ಎಂದು ಅಂದಾಜಿಸಲಾಗಿದೆ. ಬಾಡಿ ಹುಡುಕಾಟದಲ್ಲಿ ಪೊಲೀಸರು ಮತ್ತು ಸಿಬ್ಬಂದಿ ನಿರತರಾಗಿದ್ದಾರೆ. ಬಿಇಓ ಮತ್ತು ತಮ್ಮ ಕಚೇರಿಯ ಮಹಿಳಾ ಸುಪರ ಟೆಂಡಂಟ್ ಮತ್ತು ಪತ್ರಾಂಕಿತ ವ್ಯವಸ್ಥಾಪಕರ ಕಿರುಕುಳಕ್ಕೆ ಬೆಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶಣಾಗಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ವಿಕಲಚೇತನರಾಗಿದ್ದ ಮಂಜುನಾಥ ಸೋಮವಾರವಬೆಳೆಗ್ಗೆ ತನ್ನ ತ್ರೀಚಕ್ರ ಸ್ಕೂಟಿ ಬೈಕ್ ಮೇಲೆ ಹೊಗಿ ಬೈಕ್ ಕಾಲುವೆ ದಂಡೆಯಲ್ಲಿ ಬಿಟ್ಟು ಹಾರಿರುವುದಾಗಿ ಶಂಕಿಸಲಾಗಿದೆ.
ಈ ಕುರಿತು ಮಾಹಿತಿ ಬಂದಿದ್ದು, ಡೆತ್ ನೋಟ್ ಪರಿಶೀಲಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಎಸ್ .ಪಿ ಡಾ.ರಾಮ್ ಅರಸಿದ್ದಿ ತಿಳಿಸಿದ್ದಾರೆ.






