ಗಂಗಾವತಿ ಪಬ್ಲಿಕ್ ಕ್ಲಬ್ ಆಸ್ತಿ ನಗರಸಭೆಗೆ ಸೇರಿದೆ: ಆರ್ಸಿ ಆದೇಶ- ನಗರಸಭೆ ಅಧಿಕಾರಿಗಳಿಂದ ವಶಕ್ಕೆ: ಆಸ್ತಿ ಮುಟ್ಟುಗೋಲು- 60 ವರ್ಷಗಳ ಪಬ್ಲಿಕ್ ಕ್ಲಬ್ ಒಡೆತನದ ಕಟ್ಟಡ ಮತ್ತು ಮಳಿಗೆಗಳಿಗೆ ಬೀಗ

ಗಂಗಾವತಿ. (ಸಮರ್ಥವಾಣಿ ನ್ಯೂಜ್)
ಸುಮಾರು 60 ವರ್ಷಗಳಿಗಿಂತಲೂ ಹೆಚ್ಚು ವರ್ಷ ಕಾಲ ಮನೋರಂಜನೆ ಮತ್ತು ಕ್ರೀಡಾ ಚಟುವಟಿಕೆ, ಶಾಲೆ, ಸೆಟಲ್ ಕಾಕ್, ಬಾಲ್ ಬ್ಯಾಟಮಿಂಟನ್ ಕ್ರೀಡೆಗಳ ಮೈದಾನ, ಸುಸಜ್ಜಿತ ರಂಗ ಮಂದಿರ ಸೇರಿ ಹತ್ತಾರು ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಗಂಗಾವತಿ ಪಬ್ಲಿಕ್ ಕ್ಲಬ್ ಆಸ್ತಿ ಈಗ ನಗರಸಭೆಗೆ ಸೇರಿದೆ ಎಂಬುದು ದೃಢಪಟ್ಟಿದ್ದು, ಕಲಬುರ್ಗಿ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದು ಅಂತಿಮವಾಗಿ ನಗರಸಭೆ ಸೇರಿದೆ ಎಂದು ಆದೇಶ ಹೊರಬಿದ್ದಿದ್ದು, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಮತ್ತು ಸಿಬ್ಬಂದಿಗಳು ಪಬ್ಲಿಕ್ ಕ್ಲಬ್ನ್ನು ತಮ್ಮ ವಶಕ್ಕೆ ಪಡೆದುಕೊಂಡು ಬೀಗ ಜಡಿದಿದ್ದಾರೆ.
ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ಆ.4 ರಂದು ಆದೇಶ ಮಾಡುತ್ತಿದ್ದಂತೆ ಬುಧವಾರ ಬೆಳೆಗ್ಗೆ ಅಧಿಕಾರಿಗಳು ಆಗಮಿಸಿ ಪಬ್ಲಿಕ್ ಕ್ಲಬ್ ಆವರಣದಲ್ಲಿರುವ ಕಟ್ಟಡಗಳನ್ನು ವಶಕ್ಕೆ ಪಡೆದುಕೊಂಡು ಮುಟ್ಟುಗೋಲು ಹಾಕಿಕೊಂಡರು. ನಗರಸಭಾ ವ್ಯಾಪ್ತಿಯ ವಾರ್ಡ ನಂ.19, ಸ್ವತ್ತಿನ ಸಂಖ್ಯೆ:5-3-51/1/5-3-47/1, ಪಿಐಡಿ ನಂ. 19-2-8-2680 ಅಂದಾಜು 5411.7855 ಮೀಟರ(5 ಎಕರೆಗೂ ಅಧಿಕ) ಆಸ್ತಿಯ ಕುರಿತಂತೆ ಗಂಗಾವತಿ ನಗರಸಭೆಯ ಪೌರಾಯುಕ್ತರು ನ್ಯಾಯವಾದಿಗಳ ಮೂಲಕ ಗಂಗಾವತಿ ನಗರಸಭಾ ವ್ಯಾಪ್ತಿಯ ವಾರ್ಡ.ನಂ.19, ಸ್ವತ್ತಿನ ಸಂಖ್ಯೆ:5-3-51/1/5-3-47/1 ಪಿಐಡಿ ನಂ.19-2-8-2680 5411.7855 ದಿನಾಂಕ:06.7.2019ರಂದು ಪೌರಾಯುಕ್ತರು ನಗರಸಭೆ ಗಂಗಾವತಿ ರವರು ಹೊರಡಿಸಿರುವ ಖಾತಾ, ನಮೂನೆ-3 ವಿತರಿಸಿದ ಹಾಗೂ ಅದಕ್ಕನುಗುಣವಾಗಿ ಆಗಿರುವ ಇನ್ನಿತರೆ ದಾಖಲೆಗಳನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 322ರಡಿ ಮನವಿ ಸಲ್ಲಿಸಿ, ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 322ರಡಿ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸಿದ್ದರು.
ಸಲ್ಲಿಕೆಯಾದ ಪರಿಷ್ಕರಣೆ ಅರ್ಜಿಯನ್ನು ಭಾರತೀಯ ಪರಿಮಿತಿ ಕಾಯ್ದೆ ಕಲಂ (5) ರಡಿ ವಿಳಂಬತೆಯನ್ನು ಮನ್ನಾ ಮಾಡಿ, ಅಂಗೀಕರಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಕಕ್ಷಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ, ನೋಟಿಸು ಜಾರಿಗೊಳಿಸಿ, ಪ್ರಕರಣದ ವಿಚಾರಣೆಯನ್ನು ದಿನಾಂಕ:07.05.2026, 18.06.2026, 02.07.2020 ಮತ್ತು ಅಂತಿಮವಾಗಿ ದಿನಾಂಕ:9..7.26 ರಂದು ಜರುಗಿಸಿದ ಪ್ರಾದೇಶಿಕ ಆಯುಕ್ತರು ವಾದಿ ಮತ್ತು ಪ್ರತಿ ವಾದಿಗಳೊಂದಿಗೆ ವಿಚಾರಣೆ ನಡೆಸಿದ್ದಾರೆ.
ಸರ್ವೇ.ನಂ. 197/*/1, ವಿಸ್ತೀರ್ಣ 5 ಎಕರೆ 37 ಗುಂಟೆ, ಹಾಗೂ ಸರ್ವೇ ನಂ:197/6/2 ವಿಸ್ತೀರ್ಣ 1 ಎಕರೆ 33 ಗುಂಟೆ, ಜಮೀನು ಸರ್ಕಾರಿ ಆಸ್ತಿಯಾಗಿದ್ದು, ದಿಶಾಂಕ್ ಅಪ್ಲಿಕೇಶನ ಮೂಲಕ ದಾಖಲೆಗಳನ್ನು ಪರಿಶೀಲಿಸಿದಾಗ, ನಗರಸಭೆ ಗಂಗಾವತಿಯ ಆಸ್ತಿಯಾಗಿರುತ್ತದೆ. ಆದರೇ ಪ್ರತಿವಾದಿಯಾದ ಪಬ್ಲಿಕ ರಿಕ್ರಿಯೇಷನ್ ಅಸೋಸಿಯೇಷನ್ ಪಬ್ಲಿಕ ಕ್ಲಬ್ ಇವರು ನಗರಸಣೆ ದಾಖಲೆಗಳಲ್ಲಿ ನಿಯಮಬಾಹಿರವಾಗಿ ಯಾವುದೇ ಮೂಲ ಮಾಲೀಕತ್ವದ ದಾಖಲೆಗಳಿಲ್ಲದೆ, ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದರೂ ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸದೇ ಪ್ರತಿವಾದಿಯು ಮೌಖಿಕವಾಗಿ ಹೇಳಿಕೆಯನ್ನು ಸಲ್ಲಿಸಿ ಸದರಿ ಕ್ಲಬ್ 1971 ರಂದು ನೋಂದಣಿಯಾಗಿದ್ದು, ಸದರಿ ಕ್ಲಬ್ನಲ್ಲಿ ಕನ್ನಡ ಮಾಧ್ಯಮ ಶಾಲೆಯ ಕಟ್ಟಡವನ್ನು 1975ರಲ್ಲಿ ರೂ.8.90 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಶ್ರೀ ಗುರು ಪುಟ್ಟರಾಜ ಪಬ್ಲಿಕ ಶಾಲೆ, ಸುಮಾರು 10 ವರ್ಷಗಳ ಹಿಂದೆ 11 ಅಂಗಡಿಗಳನ್ನು ನಿರ್ಮಿಸಲಾಗಿ, ಶಟಲ್ ಕಾಕ್ಗಾಗಿ ಸಭಾಂಗಣವನ್ನು 2024 ರಲ್ಲಿ ನಿರ್ಮಿಸಲಾಗಿರುತ್ತದೆ. ಹಾಗೂ ಸದರಿ ಕ್ಲಬ್ನಲ್ಲಿ ಒಟ್ಟು 200 ಜನ ಸದಸ್ಯರಿದ್ದು ಸದಸ್ಯತ್ವ ನೊಂದಣಿಗಾಗಿ ರೂ.5000/- ಶುಲ್ಕ ಪಡೆದು ಚಟುವಟಿಕೆ ನಡೆಸಲಾಗುತ್ತದೆ ಎಂದು ತಿಳಿಸಿದ್ದು, ಸದರಿ ಆಸ್ತಿಯಲ್ಲಿ ಪ್ರತಿವಾದಿಗಳು ಯಾವುದೇ ಹಂಚಿಕೆ ಪತ್ರ/ಪ್ರಭಾರ ದಾಖಲೆಗಳಿಲ್ಲದೇ ಹಾಗೂ ಯಾವುದೇ ಕಟ್ಟಡ ಪರವಾನಿಗೆಯನ್ನು ಪಡೆಯದೇ ಸದರಿಯವರು ಕ್ಲಬ್ನ ಪರಿಭಾಷೆ ಬಿಟ್ಟು ಶಾಲೆ, ವಾಣಿಜ್ಯ ಮಳಿಗೆ ಇತ್ಯಾದಿಗಳನ್ನು ತಮ್ಮ ವ್ಯಾಪ್ತಿಮೀರಿ ಕಾನೂನುಬಾಹಿರವಾಗಿ ನಿರ್ಮಿಸಿದ್ದಾರೆ ಎಂಬ ಅಂಶವನ್ನು ಎತ್ತಿ ಹಿಡಿದಿದ್ದಾರೆ. ಮತ್ತು ಈ ಆಸ್ತಿಗೆ ಸಂಬಂಧಿಸಿದಂತೆ ತಹಸೀಲ್ದಾರ ಗಂಗಾವತಿ ರವರು ಸಹ ದಿನಾಂಕ: 8.7.26. ರಂದು ಸಲ್ಲಿಸಿದ ವರದಿಯನ್ನು ಅವಲೋಕಿಸಿದಾಗ ವಾಸ್ತವವಾಗಿ ಗಂಗಾವತಿ ಗ್ರಾಮ ಸರ್ವೇ.ನಂ.198/2 ಈ ಜಮೀನು ಮೂಲತಃ ಸರ್ಕಾರಿ ಜಮೀನಾಗಿದ್ದು, ನಿಯಮಬಾಹಿರವಾಗಿ ಪರವಾನಿಗೆ ಪಡೆಯದೇ ಈ ಸರ್ಕಾರಿ ಜಮೀನಿನಲ್ಲಿ ಕಟ್ಟಡಗಳನ್ನು ರಚಿಸಿರುವುದು ಕಂಡುಬರುತ್ತಿದೆ. ಮತ್ತು ಈ ಜಮೀನು ಖಡಾಖಂಡಿತವಾಗಿ ಸರ್ಕಾರಿ ಜಮೀನಾಗಿರುವುದು ದೃಡಪಟ್ಟಿರುತ್ತದೆ ಎಂಬ ಅವಂಶವನ್ನು ಪ್ರಸ್ತಾಪಿಸಿದ್ದಾರೆ. ಮತ್ತು
ಪ್ರತಿವಾದಿಯಾದ ಅಧ್ಯಕ್ಷರು ಪಬ್ಲಿಕ ರಿಕ್ರಿಯೇಶನ ಕ್ಲಬ್ ಈ ಜಮೀನು ಸರ್ಕಾರಿ ಜಮೀನಾಗಿರುವುದಾಗಿ ಒಪ್ಪಿಕೊಂಡಿರುತ್ತಾರೆ. ವಾಸ್ತವಿಕವಾಗಿಯೂ ಪಹಣಿ ದಾಖಲಾತಿಗಳಲ್ಲಿ ಸಹ ಪ್ರಶ್ನಿತ ಆಸ್ತಿಯಾದ ಗಂಗಾವತಿ ಗ್ರಾಮದ ಸರ್ವೇ.ನಂ.198/2ರಲ್ಲಿ ಸಹ ’ತಾಮೀರಾತ ಬಂಗಲಾ’ ನಮೂದಾಗಿದ್ದು ಇರುತ್ತದೆ ಹಾಗೂ ಕಾಲಂ ನಂ.12 ರ ಅನುಬೋಗದಾರರ ಕಾಲಂನಲ್ಲಿ ಮೇಲಿನ ಹೆಸರಿನೊಂದಿಗೆ ಪಬ್ಲಿಕ ಕ್ಲಬ ಇರುವುದಾಗಿ ನಮೂದಾಗಿರುತ್ತದೆ. ಹೀಗಿರುವಾಗ ಯಾವುದೇ ದಾಖಲಾತಿಗಳಲ್ಲಿಯೂ ಕ್ಲಬ್ಗೆ ಹಂಚಿಕೆಯಾಗಿರುವುದರ ಕುರಿತು ಮಾಹಿತಿ ಲಭ್ಯವಿರುವುದಿಲ್ಲ. ಸದರಿರವರು ಹೊಟ್ಟಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಡಿಮಾಂಡ್ ರೆಜಿಸ್ಟಾರ್ನಲ್ಲಿ ಬೈ-ನಂಬರ ಪಡೆದುಕೊಂಡಿರುವುದು ಹಾಗೂ ಪಹಣಿ ದಾಖಲೆಗಳಲ್ಲಿಯು ಸಹ ಕಾನೂನುಬಾಹಿರವಾಗಿ ಪಬ್ಲಿಕ ಕ್ಲಬ್ ಹೆಸರು ನೊಂದಾಯಿಸಿಕೊಂಡಿರುವು ದಾಖಲೆಗಳಿಂದ ಖಚಿತವಾಗಿರುತ್ತದೆ.
ಪ್ರತಿವಾದಿಗಳಾದ ಪಬ್ಲಿಕ್ ಕ್ಲಬ್ನವರು ನಗರಸಭೆ ಬೇಡಿಕೆ ಪುಸ್ತಕದಲ್ಲಿ ಅಧಿಕೃತವಾಗಿ ನೋಂದಣಿಯಾಗದೆ ಪ್ರತಿವಾದಿಗಳ ಅರ್ಜಿಯ ಆಧಾರದ ಮೇರೆಗೆ ಖಾತೆ ನೋಂದಣಿಯಾಗಿರುವುದು ಮತ್ತು ಪ್ರತಿವಾದಿಗಳು ಮಾಲಿಕತ್ವ ದಾಖಲಾತಿ ಸಲ್ಲಿಸುವಲ್ಲಿ ವಿಫಲರಾಗಿರುತ್ತಾರೆ. ಕಂದಾಯ ದಾಖಲಾತಿಗಳಲ್ಲಿ ಹೆಸರನ್ನು ನೊಂದಾಯಿಸಬೇಕಾದಲ್ಲಿ ಹಕ್ಕು ಬದಲಾವಣೆ ಅಥವಾ ಮಾಲೀಕತ್ವದ ದಾಖಲೆಗಳ ಆಧಾರದ ಮೇಲೆ ನೋಂದಾಯಿಸಿಕೊಳ್ಳಲಾಗುವುದು. ಆದರೇ ಪ್ರಸ್ತಾಪಿತ ಪಬ್ಲಿಕ ಕ್ಲಬನ ಆಸ್ತಿಯೆಂದು ದೃಡಪಡಿಸಿಕೊಳ್ಳುವುಂತಹ ಹಂಚಿಕೆ/ಪ್ರಭಾರೆ ಕುರಿತ ಯಾವುದೇ ದಾಖಲೆಗಳನ್ನು ಹೊಂದಿರುವುದಿಲ್ಲ. ಈ ಎಲ್ಲಾ ಕಾರಣಗಳ ಹಿನ್ನಲೆಯಲ್ಲಿ ತಹಸೀಲ್ದಾರ ಗಂಗಾವತಿ ವರದಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಗಂಗಾವತಿ ಇವರ ವರದಿ ಹಾಗೂ ಪಹಣಿ ಪ್ರತಿಗಳನ್ನು ಅವಲೋಕಿಸಿದಾಗ ಪ್ರಕರಣದ ಪ್ರಶ್ನಿತ ಗಂಗಾವತಿ ಗ್ರಾಮದ ಸರ್ವೇ.ನಂ.೧೯೮/೨ ಜಮೀನು ಮೂಲತಃ ಸರ್ಕಾರಿ ವ್ಯಾಪ್ತಿಗೊಳಪಡುವ ಸರ್ಕಾರಿ ಜಮೀನಾಗಿದ್ದು, ಆಸ್ತಿ ಸಂಖ್ಯೆ:5-3-51/1/5-3-47/1 ಎಂದು ಖಾತೆ ಆದೇಶ ಸಂಖ್ಯೆ:ನಂ.ನ.ಸ.ಗಂ/8/1998-99 ದಿನಾಂಕ:15.01.1999ರನ್ವಯ ಪ್ರಶ್ನಿತ ಆಸ್ತಿಯ ಹಂಚಿಕೆ/ಪ್ರಭಾರ, ದಾಖಲಾತಿಗಳನ್ನು ಸಲ್ಲಿಸದೆ ಇರುವುದರಿಂದ ಪ್ರಶ್ನಿತ ಆಸ್ತಿಯ ಖಾತಾ ವರ್ಗಾವಣೆ, ನಮೂನೆ-೩ ಹಾಗೂ ಇದಕ್ಕನುಗುಣವಾಗಿ ಈ ಆಸ್ತಿ ಕುರಿತು ನಗರಸಭೆಯಲ್ಲಿ ಆಗಿರುವ ಎಲ್ಲಾ ದಾಖಲೆಗಳನ್ನು ರದ್ದುಪಡಿಸಿ, ಈ ಆಸ್ತಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯ ಕಟ್ಟಡ, ಶ್ರೀ ಗುರು ಪುಟ್ಟರಾಜ ಪಬ್ಲಿಕ ಶಾಲೆ, 11 ಮಳಿಗೆಗಳನ್ನು ಹಾಗೂ ಇನ್ನಿತರೆ ಆಟದ ಸಭಾಂಗಣಗಳನ್ನು ನಗರಸಭೆಯ ಸ್ವಾಧೀನದಲ್ಲಿ ತೆಗೆದುಕೊಳ್ಳುವುದು ಸೂಕ್ತವೆಂದು ಪರಿಗಣಿಸಿ ಪ್ರಾದೇಶಿಕ ಆಯುಕ್ತರು ತಮ್ಮ ನ್ಯಾಯಾಲಯದಲ್ಲಿ ಘೋಷಣೆ ಮಾಡಿ ಆದೇಶಿಸಿದ್ದಾರೆ.
ಪ್ರಾದೇಶಿಕ ಆಯುಕ್ತರ ಆ.೪ರ ಆದೇಶದನ್ವಯ ನಗರಸಭೆ ಪೌರಾಯುಕ್ತರು ಮಂಗಳವಾರ ಪಬ್ಲಿಕ್ ಕ್ಲಬ್ಗೆ ತೆರಳಿ ಸಂಬಂಧಿಸಿದವರಿಗೆ ಮಾಹಿತಿ ನೀಡಿ ಆಸ್ತಿಯನ್ನು ವಶಪಡಿಸಿಕೊಂಡು ಬೀಗ ಹಾಕಿದ್ದಾರೆ. ಮತ್ತು ಹನ್ನೊಂದು ಮಳಿಗೆಲ್ಲಿರುವ ಬಾಡಿಗೆದಾರರಿಗೂ ನೊಟೀಸ್ ನೀಡಿದ್ದಾರೆ.
ಬಾಕ್ಸ್:
ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ
ಕಳೆದ ಎಪತ್ತು ವರ್ಷಗಳಿಂದ ಈ ಜಾಗದಲ್ಲಿ ಪಬ್ಲಿಕ್ ಮನೋರಂಜನೆ ಮತ್ತು ಕ್ರೀಡೆ, ಶಾಲೆ, ಸಾಂಸ್ಕೃತಿಕ ರಂಗ ಮಂದಿರ ಮತ್ತಿತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ನಗರಸಭೆಯಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಇದ್ದರು. ಪ್ರಾದೇಶಿಕ ಆಯುಕ್ತರು ನೀಡಿರುವ ಆದೇಶದನ್ವಯ ನಗರಸಭೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸಾಮಾಜಿಕ ಚಟುವಟಿಕೆಗೆ ಸಂಬಂಧಿಸಿರುವುದರಿಂದ ನಾವು ಕಾನೂನು ಮೊರೆ ಹೋಗುತ್ತೇವೆ. ಪ್ರಾದೇಶಿಕ ಆಯುಕ್ತರ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ.
ಮಹಾಬಳೇಶ ಹಾಸಿನಾಳ್, ವಕೀಲರು ಹಾಗೂ ಪಬ್ಲಿಕ್ ಕ್ಲಬ್ ಅಧ್ಯಕ್ಷರು, ಗಂಗಾವತಿ.
ಬಾಕ್ಸ್:
ನಿವೃತ್ತ ಪೌರಾಯುಕ್ತರು ಸಹ ಪಬ್ಲಿಕ್ ಕ್ಲಬ್ ಅಧ್ಯಕ್ಷರಾಗಿದ್ದರು..!! ಕಳೆದ ಅರವತ್ತು ಎಪತ್ತು ವರ್ಷಗಳಿಂದ ಗಂಗಾವತಿ ನಗರದ ನೀಲಕಂಠೇಶ್ವರ ವೃತ್ತದ ಹೃದಯ ಭಾಗದಲ್ಲಿರುವ ಪಬ್ಲಿಕ್ ಕ್ಲಬ್ನಲ್ಲಿ ಸಾಂಸ್ಕೃತಿಕ, ಕ್ರೀಡೆ, ಮನೋರಂಜನೆ ಚಟುವಟಿಕೆಗಳು ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಸಹ ನಡೆಯುತ್ತಿದೆ. ಜೊತೆಗೆ 11 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಕ್ಲಬ್ನಲ್ಲಿ ಸುಮಾರು 200ಕ್ಕೂ ಅಧಿಕ ವಿವಿಧ ಸಾಮಾಜಿಕ ಜವಬ್ದಾರಿ ಇರುವ ಮತ್ತು ಪ್ರತಿಷ್ಟಿತ ವ್ಯಕ್ತಿಗಳು ಸದಸ್ಯರಾಗಿದ್ದು, ನಗರಸಭೆ ನಿವೃತ್ತ ಪೌರಾಯುಕ್ತರೊಬ್ಬರು ಸದಸ್ಯರಾಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಅವರು ಇದುವರೆಗೂ ಯಾವುದೇ ದಾಖಲೆಗಳನ್ನು ಪರಿಶೀಲನೆ ಮಾಡದೇ ಸದಸ್ಯತ್ವ ಪಡೆದುಕೊಂಡು ಅಧ್ಯಕ್ಷರಾಗಿ ಪಬ್ಲಿಕ್ ಕ್ಲಬ್ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಆಶ್ಚರ್ಯ ಮೂಡಿಸಿದೆ.ಬಾಕ್ಸ್:
ಇನ್ನಿತರ ಸರಕಾರಿ ಆಸ್ತಿಗಳನ್ನು ವಶಪಡಿಸಿಕೊಳ್ಳಲಿ
ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಕೇವಲ ಪಬ್ಲಿಕ್ ಕ್ಲಬ್ ಆಸ್ತಿ ಮಾತ್ರವಲ್ಲದೇ ಇನ್ನಿತರ ಹಲವು ಕೋಟಿಗಟ್ಟಲೇ ಬೆಲೆ ಬಾಳುವ ಆಸ್ತಿಗಳು ಸರಕಾರಿ ಆಸ್ತಿಗಳಾಗಿದ್ದು, ಇಂದಿಗೂ ನಗರಸಭೆ ಆಸ್ತಿ ಎಂದು ದಾಖಲೆಗಳು ದೃಢಪಡಿಸುತ್ತಿವೆ. ಮತ್ತು ಹಿಂದೆ ಕೊಪ್ಪಳದ ಸಾಹಯಕ ಆಯುಕ್ತರ ಸಮೀಕ್ಷೆ ವರದಿ ಪ್ರಕಾರ ಪ್ರಾದೇಶಿಕ ಆಯುಕ್ತರು ಅಂತಹ ಆಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಆದೇಶವನ್ನು ಮಾಡಿದ್ದರು. ಆದರೆ ನಗರಸಭೆ ಅಧಿಕಾರಿಗಳು ಅವುಗಳ ಬಗ್ಗೆ ಅಷ್ಟೊಂದು ಮುತುವರ್ಜಿವಹಿಸದೇ ಮತ್ತು ರಾಜಕೀಯ ಪ್ರಭಾವಕ್ಕೊಳಗಾಗಿ ಸರಕಾರಿ ಆಸ್ತಿಯನ್ನು ಖಾಸಗಿಯವರ ಕೈಗೆ ಕೊಟ್ಟು ಕುಳಿತಿದ್ದಾರೆ. ಆದರೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಅವರು ಈಗ ಪ್ರಾದೇಶಿಕ ಆಯುಕ್ತರ ಆದೇಶದಂತೆ ಪಬ್ಲಿಕ್ ಕ್ಲಬ್ ಆಸ್ತಿಯನ್ನು ಯಾವುದೇ ಒತ್ತಡಗಳಿಗೆ ಪ್ರಭಾವಕ್ಕೆ ಒಳಗಾಗದೇ ವಶಪಡಿಸಿಕಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ಅವರು ಗಂಗಾವತಿ ನಗರದಲ್ಲಿರುವ ಇನ್ನಿತರ ಸರಕಾರಿ ಮತ್ತು ನಗರಸಭೆ ಮಾಲೀಕತ್ವದ ಆಸ್ತಿಗಳನ್ನು ಸಹ ವಶಪಡಿಸಿಕೊಂಡು ಸರಕಾರದ ಯೋಜನೆಗಳಿಗೆ ಉಪಯೋಗಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.






