ಪ್ರೀತಿಸಿ ಕೈ ಕೊಟ್ಟ ಹುಡುಗಿ: ರೈಲ್ವೆಗೆ ತಲೆಕೊಟ್ಟ ಯುವಕ- ಕಾರಟಗಿಯ ಶಿವಕುಮಾರನ ದೇಹ ಪಿಸ್ ಪಿಸ್
ಇವರಿಂದ: Harish

ಕಾರಟಗಿ. ಸಮರ್ಥವಾಣಿ ನ್ಯೂಜ್.
ಪ್ರೀತಿಸಿ ಕೈಕೊಟ್ಟ ಹುಡುಗಿಗಾಗಿ ರೈಲ್ವೆಗೆ ತಲೆಕೊಟ್ಟ ಯುವಕ ಸಾವಪ್ಪಿರುವ ಘಟನೆ ತಾಲೂಕಿನ ಬುದುಗುಂಪಾ ಗ್ರಾಮದ ಹತ್ತಿರ ರೈಲ್ವೆ ಹಳಿಯಲ್ಲಿ ನಡೆದಿದ್ದು, ಕಾರಟಗಿಯ ದಲಾಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಯುವಕ ಶಿವಕುಮಾರ ತಂದೆ ಶರಣಪ್ಪನ ದೇಹ ಪಿಸ್ ಪಿಸ್ ಆಗಿದೆ.
ಸೋಮವಾರ ರಾತ್ರಿ 8.30 ಗಂಟೆಗೆ ಘಟನೆ ನಡೆದಿದೆ. ರವಿಚಂದ್ರ ಮತ್ತು ಶಿವುಕುಮಾರ ಎಂಬ ಇಬ್ಬರು ಯುವಕರು ಸೇರಿ ರೈಲ್ವೆ ಹಳಿ ಮೇಲೆ ಕುಳಿತು ಮದ್ಯ ಸೇವಿಸಿದ್ದಾರೆ. ತನ್ನನ್ನು ಪ್ರೀತಿಸಿದ ಹುಡುಗಿ ತನಗೆ ಕೈಕೊಟ್ಟು ಬೇರೆಯವನನ್ನು ಮದೇವೆ ಆಗಿದ್ದರಿಂದ ನನಗೆ ಬಹಳ ಬೇಜಾರಾಗಿದೆ ಎಂದು ಸಾವಪ್ಪಿರುವ ಯುವಕ ಶಿವಕುಮಾರ ತನ್ನ ಗೆಳೆಯನಿಗೆ ತಿಳಿಸಿದ್ದಾನೆ. ಗೆಳೆಯ ರವಿಚಂದ್ರ ಮೂತ್ರ ಮಾಡಲು ಹಳಿಯ ಪಕ್ಕಕ್ಕೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಗಂಗಾವತಿ ಕಡೆಯಿಂದ ರಾತ್ರಿ 8-30 ಕ್ಕೆ ರೈಲ್ವೆ ಬಂದಿದೆ. ಆದರೂ ಶಿವಕುಮಾರ ಹಳೆಯ ಮೇಲೆ ಹಾಗೆಯೆ ಮಲಗಿದ್ದಾನೆ. ಇದನ್ನು ಗಮನಿಸಿದ ರವಿಚಂದ್ರ ಗೆಳೆಯನನ್ನು ಎಳೆದುಕೊಳ್ಳುವಷ್ಟರಲ್ಲಿ ಶಿವಕುಮಾರನ ದೇಹ ತುಂಡಾಗಿದೆ. ಹೊರಗಡೆ ಎಳಿಯಲು ಹೋದಾಗ ರವಿಚಂದ್ರನ ಕೈಗೆ ಪೆಟ್ಟಾಗಿದ್ದು, ಗಂಗಾವತಿ ಉಪವಿಬಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಶಿವುಕುಮಾರ ರೈಲ್ವೆ ಹಳಿಗೆ ಸಿಲುಕಿದ್ದರಿಂದ ದೇಹ ಫೀಸ್ ಪೀಸ್ ಆಗಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಕಾರಟಗಿ ಪಿಐ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಸಾವಪ್ಪಿರುವ ಯುವಕನ ಮಾಹಿತಿ ಲಭ್ಯವಾಗಲಿದೆ.






