ಕೊಪ್ಪಳ ಎಸ್ ಪಿ ಡಾ.ರಾಮ್ ಅರಸಿದ್ದಿವರ್ಗಾವಣೆ- ನೂತನ ಎಸ್ ಪಿ ಶಾಹಿಲ್ ಬಾಗ್ಲಾ ನಿಯೋಜನೆ
ಇವರಿಂದ: ಗಿರೀಶ ಕುಲಕರ್ಣೀ ಕುಲಕರ್ಣೀ

ಕೊಪ್ಪಳ. (ಸಮರ್ಥವಾಣಿ ನ್ಯೂಜ್)
ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ರಾಮ್ ಲಕ್ಷ್ಮಣಸಾ ಅರಸಿದ್ದಿ ವರ್ಗಾವಣೆಗೊಂಡಿದ್ದು, ಇವರ ಜಾಗಕ್ಕೆ ಬೆಂಗಳೂರಿನ ಪೂರ್ವ ವಲಯದ ಸಂಚಾರಿ ಡಿಸಿಪಿಯಾಗಿದ್ದ ಶಾಹಿಲ್ ಬಾಗ್ಲಾ ನಿಯೋಜನೆಗೊಂಡಿದ್ದಾರೆ.
ಶನಿವಾರ ಆಡಳಿತ ವಿಭಾಗದ ಸರಕಾರದ ಕಾರ್ಯದರ್ಶಿ ರಾಜ್ಯದ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಿದ್ದಾರೆ. 2018 ಐಪಿಎಸ್ ಕೇಡರ್ ನ ಶಾಹಿಲ್ ಬಾಗ್ಲಾ ಅವರು ಇನ್ನು ಮುಂದೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.






