ಮಳೆಯ ಕೊರತೆ: ಟಿಬಿ ಡ್ಯಾಂ ಖಾಲಿ ಖಾಲಿ ಮುಂಗಾರು ಬೆಳೆಗೆ ನೀರು ಇಲ್ಲಾ-ಕಾಡಾ ಪ್ರಕಟಣೆ
ಇವರಿಂದ: Harish

ಕೊಪ್ಪಳ
ತುಂಗಭದ್ರಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಪ್ರಸ್ತುತ ಮಳೆ ಕೊರತೆಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದಿಲ್ಲ. ಆದಕಾರಣ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗುವುದಿಲ್ಲವೆಂದು ಕರ್ನಾಟಕ ನೀರಾವರಿ ನಿಗಮದ ತುಂಗಭದ್ರಾ ಯೋಜನಾ ವೃತ್ತ. ಮುನಿರಾಬಾದ್ ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್.ಬಿ. ಮಲ್ಲಿಗವಾಡ ತಿಳಿಸುದ್ದಾರೆ.
ಗುರುವಾರ ಪ್ರಕಟಣೆ ನೀಡಿ ರೈತರಿಗೆ ಸೂಚನೆ ನೀಡಿದ್ದಾರೆ. ನೀರಿನ ಕೊರತೆಯಿಂದಾಗಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿದೆ. ಈ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು. ಮತ್ತು ಮುಂಬರುವ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸಿ ಬೆಳೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಜಲಾಶಯದ ಕ್ರಸ್ಟ್ ಗೆಟ್ ದುರಸ್ತಿಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರು ಇದ್ದರು ಸಹ ಹಿಂಗಾರು ಬೆಸಿಗೆ ಬೆಳೆಗೆ ನೀರು ಹರಿಸದ ಪರಿಣಾಮ ರೈತರು ಕಳೆದ ವರ್ಷ ಒಂದೆ ಬೆಳೆಗೆ ಸಿಮೀತರಾಗಿದ್ದರು. ಈಗ ಜಲಾಶಯದಲ್ಲಿ ಹೊಸ ಗೇಟ್ ಜೋಡಿಸಿದ ಪರಿಣಾಮ ರೈತರು ಹರ್ಷಗೊಂಡಿದ್ದರು. ಆದರೆ ಈಗ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಾಗಿರುವುದರಿಂದ ಮುಂಗಾರು ಬೆಳೆ ಬೆಳೆಯವ ಅವಕಾಶ ಬರುತ್ತದೆಯೋ ಇಲ್ಲ ಎಂದು ಚಿಂತಿತರಾಗಿದ್ದಾರೆ.
ರೈತರ ಆತಂಕ ದೂರಗೊಳಿಸಲು ವರುಣಕೃಪೆ ತೊರಬೇಕಿದೆ.






