ಬಳ್ಳಾರಿ.ಜುಲೈ 19. ಬಳ್ಳಾರಿ ನಗರದ ಶ್ರೀರಾಮರಾಜು ಫೌಂಡೇಶನ್ ಬಳ್ಳಾರಿ ವತಿಯಿಂದ ಮೂರನೇ ವರ್ಷದ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ರಕ್ತ ದಾನ ಶಿಬಿರವು ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಬಳ್ಳಾರಿ ಇವರ ಸಹಯೋಗದಲ್ಲಿ ಜುಲೈ 20 ರಂದು ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5:30 ರ ವರೆಗೆ ಕೆ ಆರ್ ಎಸ್ ಪಂಕ್ಷನ್ ಹಾಲ್ ಮೋಕ ರಸ್ತೆಯಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಪಾಲ್ಗೊಂಡು ರಕ್ತ ದಾನ ಮಾಡಿದ ಪ್ರತಿಯೊಬ್ಬರಿಗೆ ಪ್ರಮಾಣ ಪತ್ರ ಮತ್ತು ಹೆಟ್ ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಶ್ರೀ ರಾಮ ರಾಜು ಫೌಂಡೇಶನ್ ಅಧ್ಯಕ್ಷರಾದ ರಾಮರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಕ್ತದಾನಿಗಳು ಹೆಚ್ಚಿನ ಮಾಹಿತಿಗೆ ಶಿಬಿರದ ಉಸ್ತುವಾರಿಗಳಾದ : 9845314624, 8 ໖ 7899914899, 9900684310 2 8553116692. ಸಂರ್ಪಕಿಸುವಂತೆ ಕೋರಲಾಗಿದೆ.







