ಅನ್ಸಾರಿ ಹೇಳಿಕೆ ವಿರುದ್ಧ ಹರಿಹಾಯ್ದ ಸಚಿವ ಶಿವರಾಜ ತಂಗಡಗಿ- ಶುಕ್ರವಾರ ನೀವೇ ಮೇಸೇಜ್ ಕೊಟ್ಟು ಗೆದ್ದು ತೋರಿಸಿ- ಗಾಳಿಯಲ್ಲಿ ಗುಂಡು ಹೊಡಿಬೇಡಿ: ಜನರ ಜೊತೆ ಇರೋದು ಕಲಿಯಿರಿ

ಗಂಗಾವತಿ.(ಸಮರ್ಥವಾಣಿ ನ್ಯೂಜ್)
ಎಲ್ಲೋ ಕುಳಿತುಕೊಂಡು ಆಡಿಯೋ ವಿಡಿಯೋ ಹರಿಬಿಟ್ಟರೆ ಜನರು ನಿಮ್ಮನ್ನು
ಅಪ್ಪಿಕೊಳ್ಳುವುದಿಲ್ಲ. ಶುಕ್ರವಾರ ನಿವೇ ಮೇಸೇಜ್ ಕೊಟ್ಟು ಗೆದ್ದು ತೋರಿಸಬೇಕಿತ್ತು. ನೀವು ಹೇಳಿದರೆ ಯಾರು ಗೆಲ್ಲಿಸೋದು ಸೋಲಿಸೋದು ಮಾಡಲ್ಲ. ಜನರ ಮಧ್ಯೆ ಬಂದು ಕುಳಿತು ನಿಮ್ಮ ಶಕ್ತಿ ತೋರಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಅವರು ಮಾಜಿ ಸಚಿವ ಇಕ್ಬಾಲ್
ಅನ್ಸಾರಿ ವಿರುದ್ಧ ಹರಿ ಹಾಯ್ದರು.
ಬುಧವಾರ ತಾಲೂಕಿನಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ನಂತರ ನಗರದ ಸರ್ಕಿಟ್
ಹೌಸ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಇಕ್ಬಾಲ್ ಅನ್ಸಾರಿ ಹೇಳಿಕೆಯನ್ನು ಮಾಧ್ಯಮದವರು ಪ್ರಸ್ತಾಪಿಸುತ್ತಿದ್ದಂತೆ ಇಕ್ಬಾಲ್ ಅನ್ಸಾರಿ ವಿರುದ್ಧ
ಗರ್ಂ ಆದ ಸಚಿವ ಶಿವರಾಜ ತಂಗಡಗಿ ಕೊನೆಗೂ ಅವರ ಹೇಳಿಕೆ ವಿರುದ್ಧ ಬಾಯಿ ಬಿಟ್ಟು
ಮಾತನಾಡಿದರು. ಮಸೀದಿಗೆ ಹೋಗಿ ನಮ್ಮ ವಿರುದ್ಧ ಪತ್ರ ಬರೆಯುವುದಕ್ಕಿಂತ ನಿವು ಮತ
ಹಾಕಿಸಿಕೊಂಡು ಗೆದ್ದು ತೋರಿಸಬೇಕಿತ್ತು. ನಾವು ನಿಮ್ಮನ್ನು ಸೋಲಿಸಿದ್ದೇವೆ ಎಂದು
ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ. ಸಣ್ಣ ಮಕ್ಕಳಂತೆ ಸುಳ್ಳು ಆರೋಪ ಮಾಡಿದರೆ
ಜನರು ನಂಬಲ್ಲ. ಅವರು ಈ ರೀತಿ ಮಾತನಾಡಿದ್ದಕ್ಕೆ ಗಂಗಾವತಿ ಜನರು ಸೋಲಿಸಿದ್ದಾರೆ. ಗಂಗಾವತಿ ಕ್ಷೇತ್ರದ ಜನರು ಅತ್ಯಂತ ಪ್ರಬುದ್ಧರಾಗಿದ್ದಾರೆ. ಎಲ್ಲವನ್ನು ಲೆಕ್ಕ ಹಾಕಿ
ಆಯ್ಕೆ ಮಾಡುತ್ತಾರೆ. ಸೋಲು ಗೆಲುವು ಜನರ ನಿರ್ಧಾರವಾಗಿರುತ್ತದೆ. ಮನೆಯಲ್ಲಿ
ಕುಳಿತು ಮಾತನಾಡುವುದಕ್ಕಿಂತ ಜನರ ಜೊತೆ ಬೆರೆತು ರಾಜಕೀಯ ಮಾಡುವುದನ್ನು ಅನ್ಸಾರಿಯವರು ಕಲಿಯಲಿ. ಈ
ಹಿಂದೆ ನಾನು ಕೂಡ ಸೋಲು ಕಂಡಿದ್ದೇನೆ.. ಹಾಗಂತ ನಾನು ಯಾರನ್ನು ದೂಷಣೆ ಮಾಡಿಲ್ಲ.
ಜನರೊಂದಿಗೆ ಸಂಪರ್ಕ ಸಾಧಿಸಿ ಮತ್ತೊಮ್ಮೆ ವಿಶ್ವಾಸ ಗಳಿಸಿ ಗೆದ್ದಿದ್ದೇನೆ ಎಂದು
ಅನ್ಸಾರಿಗೆ ಕಿವಿ ಮಾತು ಹೇಳಿದರು.
ಮುಂದುವರೆದು ಮಾತನಾಡಿದ ಅವರು ನಾನು ಮತ್ತು ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ
ಅವರು ಸ್ವತಃ ಅವರ ಮನೆಗೆ ಹೋದರೆ ಮನೆಯಿಂದ ಕೆಳಗಿದು ಬಂದು ನಮ್ಮನ್ನು
ಮಾತನಾಡಿಸಲಿಲ್ಲ. ನಮಗೆ ಅವರಿಂದ ಇಂತಹ ಪರಿಸ್ಥಿತಿ ಇದ್ದಾಗ ಕ್ಷೇತ್ರದ ಮತದಾರ
ಪರಿಸ್ಥಿತಿ ಹೇಗಾಗಿರಬಹುದು. ನಮ್ಮನ್ನು ಸೋಲಿಸುವ ಮೊದಲು ನೀವು ಗೆದ್ದು ತೋರಿಸಿ.
ಸೋಲನ್ನು ತಮ್ಮ ಮೇಲೆ ಹಾಕಿಕೊಳ್ಳದೇ ಇನ್ನೊಬ್ಬರು ಸೋಲಿಸಿದ್ದಾರೆ ಎಂದು ಹೇಳಿದರೆ
ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲು ನಿಮ್ಮ ಶಕ್ತಿ ತೋರಿಸಿ. ಚುನಾವಣೆಯಲ್ಲಿ
ಇನ್ನಷ್ಟು ಕೆಲಸ ಮಾಡಿ ಎಂದು ಜಿಲ್ಲಾಧ್ಯಕ್ಷನಾಗಿ ನಾನು ಸ್ವತಃ ಅವರಿಗೆ
ತಿಳಿಸಿದರೆ. ಅಣ್ಣ ನನ್ನ ಬಗ್ಗೆ ಯೋಚನೆ ಮಾಡಬೇಡ ಎಂದು ನನಗೆ ಹೇಳಿದರು ಎಂದು
ಅನ್ಸಾರಿ ಇತ್ತೀಚಿಗೆ ನೀಡಿದ್ದ ಹೇಳಿಕೆಗೆ ಆಕ್ರೋಶಭರಿತವಾಗಿ ತಂಗಡಗಿ ತಿರುಗೇಟು ನೀಡಿದರು.
ಹಣ ಕೊಟ್ಟು ಸಚಿವರಾಗಿದ್ದಾರೆ ಎಂದು ದೊಡ್ಡನಗೌಡ ಪಾಟೀಲ್ ಅವರು ಹೇಳಿರುವುದು ಹಾಸ್ಯಾಸ್ಪದ. ಬಿಜೆಪಿಯವರಿಗೆ ದುಡ್ಡು ಕೊಟ್ಟು ಅಭ್ಯಾಸ ಇದೆ. ಅದಕೆ ಈ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿ ಶಾಸಕ ದೊಡ್ಡನಗೌಡ ಹೇಳಿಕೆಗೆ ತಿರುಗೇಟು ನೀಡಿದರು.
ಬಾಕ್ಸ್:
ಮಂತ್ರಿಗಳಿಗೆ ಹಣ ಕೊಟ್ಟಿರುವ ಡಿವೈಎಸ್ಪಿ ಹೆಸರು ಅನ್ಸಾರಿ ಹೇಳಲಿ
ಡಿವೈಎಸ್ಪಿ ವರ್ಗಾವಣೆಗೆ ಮಂತ್ರಿಗಳಿಗೆ ಹಣ ಕೊಡಬೇಕು ಎಂದು ಹೇಳಿರುವ ಅನ್ಸಾರಿ ಅವರು
ಹಣ ಕೊಟ್ಟಿರುವ ಡಿವೈಎಸ್ಪಿ, ಸಿಪಿಐ ಯಾರು ಎಂದು ಬಹಿರಂಗಪಡಿಸಬೇಕು. ನಿಮ್ಮಲ್ಲಿ
ಯಾವುದೇ ಫ್ರೂಪ್ ಇದ್ದರೆ ತೊರಿಸಿ. ನೀವು ಮಂತ್ರಿಯಾಗಿದ್ದವರು ಈ ರೀತಿ ಮಾತನಾಡಿದರೆ
ಜನರು ನಂಬುವುದಿಲ್ಲ. ರಾಜಕಾರಣಿಗಳಿಗೆ ಅಭಿವೃದ್ಧಿಯೊಂದೆ ಮಾನದಂಡವಲ್ಲ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಗಂಗಾವತಿಯಂತಹ ಪ್ರಜ್ಞಾವಂತ ಮತದಾರರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಅನ್ಸಾರಿ ಕಲಿಯಲಿ. ಎಲ್ಲೆ ಕುಳಿತು ಆಡಿಯೋ ವಿಡಿಯೋ ಮಾಡೋದು
ಬಿಟ್ಟು ಮೊದಲು ನೀವು ಗೆಲ್ಲುವ ಶಕ್ತಿ ತೊರಿಸಿ. ಸೋಲು ಗೆಲುವು ಒಂದು ಸಮುದಾಯದಿಂದ
ಸಾಧ್ಯವಿಲ್ಲ. ಎಲ್ಲ ಜನರು ತಿರ್ಮಾನಿಸಬೇಕು.
ಶಿವರಾಜ ತಂಗಡಗಿ, ಸಚಿವರು, ಕರ್ನಾಟಕ ಸರಕಾರ.






