ಗಂಗಾವತಿ.(ಸಮರ್ಥವಾಣಿ ನ್ಯೂಜ್)
ಕೊಪ್ಪಳ ಜಿಲ್ಲೆಯ ಸಚಿವರಾಗಿರುವ ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ, ಸಂಸದ, ಶಾಸಕರಾಗಿರಯವ ಹಿಟ್ನಾಳ್ ಸಹೋದರರ ವಿರುದ್ದ ಟೀಕೆ ಮಾಡಿ ಅವರ ರಾಜಕೀಯ ನಡೆಯನ್ನು ಖಂಡಿಸಿ ಎರಡು ಸೆಕೆಂಡಿನಲ್ಲಿ ಅವರನ್ನು ಸೊಲಿಸುತ್ತೇನೆ ಎಂದು ಮಾತನಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. , ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮಾಡಿರುವ ಟೀಕೆಯ ಕುರಿತು ಒಂದು ವಾರದೊಳಗೆ ಸ್ಪಷ್ಟನೆ ನೀಡಬೇಕು ಎಂದು ಶೋಕಾಸ್ ನೀಡಿದ್ದು, ವಾರದೊಳಗೆ ಉತ್ತರಿಸಿದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಶೋಕಾಸ್ ನೊಟೀಸ್ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರ ಸೂಚನೆ ಮೆರೆಗೆ ಸೆ.1 ರಂದು ಅನ್ಸಾರಿಗೆ ನೊಟೀಸ್ ರವಾನಿಸಲಾಗಿದೆ. "ಕಾಂಗ್ರೆಸ್ ಪಕ್ಷ ಹಾಗೂ ಕೊಪ್ಪಳ ಜಿಲ್ಲೆಯ ಕೆಲವು ಮುಖಂಡರನ್ನು ಗುರಿಯಾಗಿಸಿಕೊಂಡು ಅನಗತ್ಯವಾಗಿ ಟೀಕೆ ಮಾಡುತ್ತಿದ್ದೀರಿ ಎಂಬ ದೂರು ಬಂದಿವೆ."
"ಸ್ವಪಕ್ಷ ಮುಖಂಡರ ವಿರುದ್ಧ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡು, ಇದರಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂದು ಸ್ಥಳೀಯ ಮುಖಂಡರು ದೂರಿದ್ದಾರೆ. ಇದಕ್ಕೆನೀವು ಉತ್ತರಿಸಬೇಕು ಎಂದು ಸೂಚನೆ ನೀಡಲಾಗಿದೆ.
ಈ ನಡುವೆ ಅನ್ಸಾರಿ ಬಲವಾಗಿ ವಿರೋದಿಸುತ್ತಿದ್ದ ಮಾಜಿ ಸಚಿವ ಮಲ್ಲಿಕಾಜುನ ನಾಗಪ್ಪ ಅವರು ಕೊಪ್ಪಳ ಡಿಸಿಸಿ ಅಧ್ಯಕ್ಷರಾಗಿರುವ ಬೆನ್ನಲ್ಲೆ ಈ ಶೋಕಾಸ್ ನೊಟೀಸ್ ಹೊರ ಬಂದಿರುವುದು ಆಶ್ಚರ್ಯ ಮೂಡಿಸಿದ್ದು, ಅನ್ಸಾರಿ ಬೆಂಬಲಿಗರು ಮಲ್ಲಿಕಾರ್ಜುನ ನಾಗಪ್ಪ ಅವರ ಆಯ್ಕೆಯನ್ನು ಸಾಮಾಜಿಕ ಜಾಲತಾಣಗಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮೇಲ್ನೋಟಕ್ಜೆ ಅನ್ಸಾರಿಗೂ ಎಂ.ನಾಗಪ್ಪ ಆಯ್ಕೆ ತೃಪ್ತಿ ತಂದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ನೋಟಿಸ್ ನೀಡಿದ ಬರೋಬ್ಬರಿ 10 ದಿನಕ್ಕೆ ನೋಟೀಸ್ ಪ್ರತಿ ಬಹಿರಂಗವಾಗಿದೆ. ಮೂಲಗಳ ಪ್ರಕಾರ, ಇಲ್ಬಾಲ್ ಅನ್ಸಾರಿ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ, ನೋಟೀಸ್ ಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಅನ್ಸಾರಿ ಅವರಿಂದಲೇ ಹೊರ ಬರಬೇಕಿದೆ.







