ಕಾರಟಗಿ.
ಲೋಕ ಕಲ್ಯಾಣಕ್ಕಾಗಿ ಸ್ವಾಮಿಜೀಯೊಬ್ಬರು ಮರ ಏರಿದ್ದು, ೧೦೧ ದಿನಗಳ ಕಾಲ ಮರದ ಮೇಲೆ ಕುಳಿತು ಅನುಷ್ಟಾನ ಮಾಡುವ ಸಂಕಲ್ಪ ಮಾಡಿದ್ದಾರೆ.
ತಾಲೂಕಿನ ಮುಸ್ಟೂರು ಗ್ರಾಮದ ಹತ್ತಿರ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಪುರದಿಂದ ಬಂದಿರುವ ಅವಧೂತ ಸ್ವಾಮೀಜಿ ಸಚ್ಚಿದಾನಂದ ಶ್ರೀಗಳು ಅನುಷ್ಠಾನ ಕೈಗೊಂಡು ಕಠಿಣ ವ್ರತಾಚರಣೆಗೆ ಮುಂದಾಗಿದ್ದಾರೆ. ಈಗಾಗಲೇ ಐದು ದಿನಗಳ ಹಿಂದೆ ಮರ ಏರಿರುವ ಸ್ವಾಮಿಗಳು ಅನ್ನ, ಆಹಾರ ತ್ಯಜಿಸಿ ವ್ರತ ಮಾಡುತ್ತಿದ್ದು, ದಿನಕ್ಕೆ ಒಂದು ಲೋಟ ಹಾಲು ಸೇವನೆ ಮಾಡುತ್ತಾರೆ. ಮಾವಿನ ತೋಟದಲ್ಲಿರುವ ಮಾವಿನ ಮರವೊಂದರಲ್ಲಿ ಜೊಪಡಿ ನಿರ್ಮಾಣ ಮಾಡಿಕೊಂಡು ಅದರಲ್ಲೇ ಮೌನವಾಗಿ ಧ್ಯಾನ ಮಾಡುತ್ತಿರುವುದು ಭಕ್ತರಿಗೆ ಆಶ್ಚರ್ಯ ಮತ್ತು ಭಕ್ತಿ ಮೂಡಿದೆ. ಸಚ್ಚಿದಾನಂದ ಶ್ರೀ ೨೦೧೨ರಲ್ಲಿ ಆಲದಮರದಲ್ಲಿ ಕುಳಿತು ಅನುಷ್ಠಾನ ಮಾಡಿ ದೇಶದಾದ್ಯಂತ ಸುದ್ದಿಯಾಗಿದ್ದರು.







