ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಇವರಿಂದ: Harish

ಗಂಗಾವತಿ.
ಹೋಳಿ ಹಬ್ಬದ ಸಂದರ್ಭದಲ್ಲಿ ನದಿ ಸ್ನಾನಕ್ಕೆಂದು ಹೋಗಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ಕಾಲುಜಾರಿ ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವಪ್ಪಿರುವ ಘಟನೆ ನಡೆದಿದೆ.
ಬುಧವಾರ ಹೋಳಿ ಹಬ್ಬ ಮುಗಿಸಿಕೊಂಡು ನಗರದ ಗಾಂಧಿನಗರದ ಮೂವ್ವರು ಯುವಕರು ಸಾಣಾಪುರ ಹತ್ತಿರ ಸ್ನಾನ ಮಾಡಲು ನದಿಗೆ ಹೊಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಮೂರು ಜನ ಯುವಕರ ಪೈಕಿ ಒಬ್ಬ ಯುವಕ ಈಜಿ ದಡಸೇರಿದ್ದು ಇಬ್ಬರು ಯುವಕರು ನೀರಿನಲ್ಲಿ ಮುಳಗಿ ಸಾವಪ್ಪಿದ್ದಾರೆ.
ಮೃತ ಇಬ್ಬರು ಯುವಕರು ಗಂಗಾವತಿಯ ಗಾಂಧಿನಗರದ ನಿವಾಸಿಗಳಾದ ಸೂರ್ಯ ಮತ್ತು ಅಭಿಷೇಕ ಇಬ್ಬರು 17 ವಯಸ್ಸು ಎಂದು ಗುರುತಿಸಲಾಗಿದೆ.






