ಯಲಬುರ್ಗಾ ರಾಯರ ಮಠಕ್ಕೆ ಸಚಿವ ಯತೀಂದ್ರ ಸಿದ್ಧರಾಮಯ್ಯ ಭೇಟಿ: ರಾಯರ ವೃಂದಾವನ ದರ್ಶನ- ಸಚಿವ ರಾಯರೆಡ್ಡಿ ಸಂಸದ ರಾಜಶೇಖರ ಹಿಟ್ನಾಳ್ ಭಾಗಿ
ಇವರಿಂದ: ಗಿರೀಶ ಕುಲಕರ್ಣೀ ಕುಲಕರ್ಣೀ

ಯಲಬುರ್ಗಾ(ಸಮರ್ಥವಾಣಿ ನ್ಯೂಜ್)
ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಗುರು ರಾಯರ ಮಧ್ಯಾರಾಧನೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರು ಆಗಮಿಸಿ ರಾಯರ ವೃಂದಾವನ ದರ್ಶನ ಪಡೆದು ಫಲ, ಮಂತ್ರಾಕ್ಷತೆ ಸ್ವೀಕರಿಸಿದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ್ ಸಾತ್ ನೀಡಿದರು.
ಭಾನುವಾರ ಶ್ರೀಮಠದಲ್ಲಿ ಮಧ್ಯಾರಾಧನೆಯ ವಿವಿಧ ಪೂಜೆ ನೇರವೇರಿಸಲಾಯಿತು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಆಗಮಿಸಿದ್ದ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರು ಸಚಿವ ಬಸವರಾಜ ರಾಯರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ ಅವರೊಂದಿಗೆ ಆಗಮಿಸಿ ರಾಯರ ದರ್ಶನ ಪಡೆದರು.
ಮಠದ ಸಮಿತಿ ಅಧ್ಯಕ್ಷ ಸುನಿಲ್ ಕುಲಕರ್ಣಿ ಮತ್ತು ಅರ್ಚಕ ಗುರುರಾಜಾಚಾರ ಪುರೋಹಿತ ಅವರು ಸಚಿವರಿಗೆ, ಸಂಸದರಿಗೆ ಫಲ ಮಂತ್ರಾಕ್ಷತೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ತಾಲೂಕ ಅಧ್ಯಕ್ಷ ಸುದೀರ ಕೊರ್ಲಹಳ್ಳಿ, ಬ್ರಾಹ್ಮಣ ಸಮಾಜದ ಮುಖಂಡರಾದ ವಸಂತರಾವ್ ಕುಲಕರ್ಣಿ, ರಾಘವೇಂದ್ರ ಹವಲ್ದಾರ, ಗುರುರಾಜ ಬಂಡಿಹಾಳ್, ಕಾಂಗ್ರೆಸ್ ಮುಖಂಡ ಶರಣಪ್ಪ ಗಾಂಜಿ, ಈಶ್ವರ ಅಟಮಾಳಗಿ ಮತ್ತಿತರು ಇದ್ದರು.






