ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ
ಸಂಪನ್ನಗೊಂಡ ಅಡವಿಸಿದ್ದೇಶ್ವರ ಮಹಾರಥೋತ್ಸವ.
ಅಂಕಲಗಿ. ೦೭- ಶುಕ್ರವಾರ ಸುಪ್ರಸಿದ್ಧ ಅಂಕಲಗಿ ಅಡವಿಸಿದ್ಧೇಶ್ವರ ಸಂಸ್ಥಾನ ಮಠದ ಮಹಾ ರಥೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ವಿಜ್ರಂಭಣೆಯಿಂದ ಜರುಗಿತು.
ಜಾತ್ರೆಯಲ್ಲಿ ದೂರದ ಮಹಾರಾಷ್ಟ್ರ, ಗೋವಾ, ಆಂಧ್ರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರಲ್ಲದೆ, ಭಕ್ತಿಯಿಂದ ರಥೋತ್ಸವದ ಮಹಾತಪಸ್ವಿ ಅಡವಿಸಿದ್ದೇಶ್ವರ ರಿಗೆ ಹಣ್ಣು,
ಕಾಯಿ, ಕಾರೀಖು ಎಸೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡರು. ಜಾತ್ರೆಯಲ್ಲಿ ದನಗಳ ಜಾತ್ರೆ ವೈಭವದಿಂದ ಕೂಡಿತ್ತು. ಜಾತ್ರಾ ಕಮಿಟಿಯು ಯಾತ್ರಿಕರಿಗೆ ಎಲ್ಲ ಸುವ್ಯವಸ್ಥೆ ಕೈಗೊಂಡಿದ್ದರಲ್ಲದೆ, ಅಚ್ಚು,ಕಟ್ಟುತನದಿಂದ ಎಲ್ಲ ಸೌಲಭ್ಯಗಳನ್ನು ಕೈಗೊಳ್ಳಲಾಗಿತ್ತು. ಮಠದ ಮಠಾಧ್ಯಕ್ಷರಾದ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಪೊಲೀಸರು ರಸ್ತೆ ಸಾರಿಗೆ ಬಸ್ಸುಗಳಿಗೆ ಶಿಸ್ತು ಸೇರಿದಂತೆ ಸುವ್ಯವಸ್ಥೆ ಕಲ್ಪಿಸಿದ್ದರು.
ಸುರೇಶ ಉರಬಿನಟ್ಟಿ






