ಬೆಳಗಾವಿ- ಆಂಜನೇಯ ನಗರ ನಿವಾಸಿ, ನಿವೃತ್ತ ಶಿಕ್ಷಕಿ, ಶ್ರೀಮತಿ ಶಾಂತವ್ವಾ ಮಹಾಂತೇಶ ಮೆಣಸಿನಕಾಯಿ (೭೨) ಅನಾರೋಗ್ಯ ದಿಂದ ನಿಧನರಾದರು.
ಮೃತರಿಗೆ ಪತಿ, ನಿವೃತ್ತ ಮುಖ್ಯೋಪಾದ್ಯಾಯ ಮತ್ತು
ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ವಾಯ್.ಮೆಣಸಿನಕಾಯಿ, ಇಬ್ಬರು ಪುತ್ರರು, ಅಪಾರ ಬಂಧುಗಳು ಇದ್ದಾರೆ.
ಶೋಕ: ಮೃತರ ನಿಧನಕ್ಕೆ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ, ಮಾಜಿ ಕಸಾಪ ಅಧ್ಯಕ್ಷರಾದ ಯ.ರು.ಪಾಟೀಲ, ಮೋಹನ ಬಸನಗೌಡ ಪಾಟೀಲ, ಸಾಹಿತಿಗಳಾದ ಡಾ. ಬಸವರಾಜ ಜಗಜಂಪಿ, ಬಿ.ಎಸ್.ಗವಿಮಠ, ಡಾ. ಜ್ಯೋತಿ ಬಾದಾಮಿ, ಶಿವಯೋಗಿ ಕುಸಗಲ್ಲ, ಸುರೇಶ ದೇಸಾಯಿ, ಲೇಖಕಿ ಜ್ಯೋತಿ ಬಾದಾಮಿ, ರತ್ನಾ ಬೆಲ್ಲದ, ಡಾ.ಗುರುದೇವಿ ಹುಲೆಪ್ಪನವರಮಠ,ಸಾವಿತ್ರಿ ಹೊತ್ತಗಿಮಠ, ಸ.ರಾ.ಸೂಳಕೂಡೆ,
ವೈದ್ಯ. ಡಾ.ಪ್ರಕಾಶ ಹಲ್ಯಾಳ, ಎಸ್ .ಎಸ್ .ಅಂಗಡಿ,ಮದನಬಾವಿ ಗ್ರಾ.ಪಂ ಸದಸ್ಯ ಯಲ್ಲನಗೌಡ ದೊಡಗೌಡರ, ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.






