ಹುಟ್ಟುಹಬ್ಬಗಳು ಪರಿಸರ ಪ್ರಜ್ನೆ ಮೂಡಿಸುವಂತಿರಲಿ.
ಅಂಕಲಗಿ ಮಠದ ಡಾ. ಅಮರಸಿದ್ಧೇಶ್ವರ ಶ್ರೀ ಅಭಿಮತ.
ಅಂಕಲಗಿ. ೨೯- ನಮ್ಮ ಹುಟ್ಟುಹಬ್ಬಗಳು, ಮದುವೆ ಸಮಾರಂಭಗಳು ಪರಿಸರದ ಪ್ರಜ್ನೆ ಮೂಡಿಸುವಂತಿರಬೇಕು ಎಂದು ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಮಠಾಧ್ಯಕ್ಷರಾದ ಡಾ. ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ಭಾನುವಾರ ಅಂಕಲಗಿಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ
ಧರ್ಮರಾಜ ಪಟ್ಟಣಶೆಟ್ಟಿ ಮತ್ತು ಮಹಾನಂದಾ ಧರ್ಮರಾಜ ಪಟ್ಟಣಶೆಟ್ಟಿ ದಂಪತಿಗಳ ೫೦ ನೇ ವರ್ಷದ ವಿವಾಹದ ಸುವರ್ಣ ಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮರಾಜ ಪಟ್ಟಣಶೆಟ್ಟಿ ಅವರ ೭೫ ನೇ ಹುಟ್ಟುಹಬ್ಬ ದ ದಿವ್ಯ ಸಾನಿಧ್ಯ ವಹಿಸಿ ಕುಂಡದ ಸಸಿಗೆ ನೀರುಣಿಸುವುದರ ಮೂಲಕ ಪರಿಸರ ಜಾಗ್ರತಿ ಮೂಡಿಸಿ ದೀಪ ಬೆಳಗಿಸಿ ಅಮ್ರತ ಮಹೋತ್ಸವ ಮತ್ತು ೫೦ ನೇ ವಿವಾಹ ಮಹೋತ್ಸವಗಳ ಸಂಯುಕ್ತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಉಸಿರಿಗೆ ಕಾರಣರಾದವರು ಕಣ್ಣಿಗೆ ಕಾಣುವ ದೇವರು. ಅವರನ್ನು ಸಲುಹಿ ಗೌರವಿಸುವದು ನಮ್ಮ ಪ್ರಥಮ ಆದ್ಯತೆಯಾಗಿರಬೇಕು. ಪಟ್ಟಣಶೆಟ್ಟಿ ದಂಪತಿಗಳು ನಡೆ,ನುಡಿಯಿಂದ ಮತ್ತು ಸಂಪನ್ನ ಗುಣಗಳಿಂದ ಎಲ್ಲದರಲ್ಲೂ ಸುಖ ಸಮ್ರದ್ಧಿ ಕಂಡಿದ್ದು ನಾಡಿಗೆ ಸ್ಫೂರ್ತಿ ಎಣಿಸಿದ್ದು, ಪ್ರತಿ ಮನೆಯ ಪ್ರತಿಯೊಬ್ಬರೂ ತಂದೆ, ತಾಯಿಗಳನ್ನು ಆದರಿಸಿ ಗೌರವಿಸಬೇಕು ಅದೇ ನಮ್ಮ ನಿಜವಾದ ಸ್ವರ್ಗ ಸುಖ . ಭಾರತೀಯ ಸಂಸ್ಕ್ರತಿ ವಿಶ್ವದಲ್ಲಿ ಎತ್ತರದ ಸ್ಥಾನದಲ್ಲಿದೆ... ಮಕ್ಕಳ ಕೈಗೆ ಮೊಬೈಲ್ ಕೊಡದೆ ಕರ್ಣ ಮಧುರ ಜೋಗುಳ ಪದ ಮತ್ತು ಸಂಸ್ಕಾರಯುತ ಕಥೆಗಳನ್ನು ಹೇಳಿ ಸಂಸ್ಕಾರ ಕೊಡಿ ಎಂದರು.
ಪಟ್ಟಣಶೆಟ್ಟಿ ದಂಪತಿಗಳು ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಿದರು.
ಪಟ್ಟಣಶೆಟ್ಟಿ ದಂಪತಿಗಳ ನ್ನು ಬಂದು,ಮಿತ್ರರು, ಧುರೀಣರು ಅಭಿಮಾನಿಗಳು ಸನ್ಮಾನಿಸಿ ಶುಭ ಕೋರಿದರು.
ಧರ್ಮರಾಜ ಪಟ್ಟಣಶೆಟ್ಟಿ ಅವರು ಶುಭ ಕೋರಿದ ಸರ್ವರನ್ನು ಅಭಿನಂದಿಸಿ ಧನ್ಯವಾದ ಹೇಳಿದರು.
ಶಿವಾನಂದ ಪಟ್ಟಣಶೆಟ್ಟಿ ಸ್ವಾಗತಿಸಿದರು.
ಡಾ ಭಾಗ್ಯಶ್ರೀ ಬೆಳಗಾವಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕೆ ಎಲ್ ಇ ನಿರ್ದೇಶಕರಾದ ರಾಜು ಮುನವಳ್ಳಿ, ಬೆಳಗಾವಿ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ಕಲ್ಲಪ್ಪಾ ಪಾಟೀಲ, ಮಲ್ಲಿಕಾರ್ಜುನ ಮಾದನಬಾವಿ, ಶಿವಮೊಗ್ಗಿ ಮಾದನಬಾವಿ, ಪ್ರೊ. ಬಸವರಾಜ ಕೊಳವಿ , ಮಂಜುನಾಥ ಪಟ್ಟಣಶೆಟ್ಟಿ, ಪಾರ್ವತಿ ಪಟ್ಟಣಶೆಟ್ಟಿ, ನಾಗೇಶ ಪಟ್ಟಣಶೆಟ್ಟಿ , ಚಂದ್ರು ಸತ್ತಿಗೇರಿ ಸೇರಿದಂತೆ
ಕಾರ್ಯಕ್ರಮದಲ್ಲಿ ಪ್ರೊ.ನಯನಾ ಗಿರಿಗೌಡರ ಸಂಗೀತ ಸೇವೆ ಜರುಗಿತು. ಕುಂದರನಾಡಿನ ಅಪಾರ ಅಭಿಮಾನಿಗಳು ಹಿರಿಯರು ಮತ್ತು ಪಟ್ಟಣಶೆಟ್ಟಿ ಪರಿವಾರದ ಸದಸ್ಯರು ಉಪಸ್ತಿತರಿದ್ದರು.
ಪ್ರೊ ಎ.ಕೆ ಪಾಟೀಲ ನಿರೂಪಿಸಿದರಲ್ಲದೆ ವಂದಿಸಿದರು.






