ದಾಸನಟ್ಟಿ ಗ್ರಾಮದ ಪರಶುರಾಮ ಯಲ್ಲಪ್ಪಾ ಗೋಡಿ (೫೦) ನಿಧನ.
ಅಂಕಲಗಿ. ೨೨- ಸಮೀಪದ ದಾಸನಟ್ಟಿ ಗ್ರಾಮದ ಬಿಜೆಪಿ ಧುರೀಣ, ಪರಶುರಾಮ ಯಲ್ಲಪ್ಪಾ (೫೦) ಮಂಗಳವಾರ ತೀವ್ರ ಹ್ರದಯಾಘಾತದಿಂದ ನಿಧನರಾದರು. ಮೃತರು ಗ್ರಾಮದ ಮತ್ತು ನಾಡಿನ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದವರಾಗಿದ್ದರಲ್ಲದೆ, ೨ ಬಾರಿ ಕುಂದರಗಿ ಗ್ರಾಮ ಪಂಚಾಯತಿ ಅದ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದರು. ಮೃತರ ಅಕಾಲಿಕ ನಿಧನಕ್ಕೆ ಗೋಕಾಕ ಬಿಜೆಪಿ ಮಂಡಳ ಅಧ್ಯಕ್ಷರಾದ ಮಲ್ಲಾಪುರದ ರಾಜೇಂದ್ರ ಗೌಡಪ್ಪಗೋಳ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ.






