ಡಾ. ರವಿ ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಜರ್ಮನಿಯ ಪ್ರಸಿದ್ಧ ಆಸ್ಪತ್ರೆಗಳ ಸಹಯೋಗದಲ್ಲಿ ಕ್ಯಾಂಪಸ್ ಸಂದರ್ಶನ ಮತ್ತು ಪ್ಲೇಸಮೆಂಟ್ ಕಾರ್ಯಕ್ರಮಬೆಳಗಾವಿಯ ಡಾ. ರವಿ ಪಾಟೀಲ್ ಆರೋಗ್ಯ ಸಂಸ್ಥೆಗಳ ನಿರ್ದೇಶಕರಾದ ಡಾ. ರವಿ ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಜರ್ಮನಿಯ ಪ್ರಸಿದ್ಧ ಆಸ್ಪತ್ರೆಗಳ ಸಹಯೋಗದಲ್ಲಿ ಇಂದಿನಿಂದ ಜನವರಿ 9 ರ ವರೆಗೆ ನಡೆಯಲಿರುವ ಕ್ಯಾಂಪಸ್ ಸಂದರ್ಶನ ಮತ್ತು ಪ್ಲೇಸಮೆಂಟ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.ಫಾರ್ಮಸಿ B. Pharma,, ನರ್ಸಿಂಗ್, ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಕೋರ್ಸ್ಗಳನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಬೆಳಗಾವಿಯ ಡಾ. ರವಿ ಪಾಟೀಲ್ ಆರೋಗ್ಯ ಸಂಸ್ಥೆಗಳ ನಿರ್ದೇಶಕರಾದ ಡಾ. ರವಿ ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಜರ್ಮನಿಯ ಪ್ರಸಿದ್ಧ ಆಸ್ಪತ್ರೆಗಳ ಸಹಯೋಗದಲ್ಲಿ ಇಂದಿನಿಂದ ಜನವರಿ 9 ರ ವರೆಗೆ ನಡೆಯಲಿರುವ ಕ್ಯಾಂಪಸ್ ಸಂದರ್ಶನ ಮತ್ತು ಪ್ಲೇಸಮೆಂಟ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
AWO ಒಬರ್-ಉಂಡ್ ಮಿಟ್ಟೆಲ್ಲ್ಯಾಂಕೆನನ ಉಟ್ರಿಕ್ ಥೆರೇಸಿಯಾ ವೈಸ್, AWO KV ನರ್ನಬರ್ಗನ ಇನಾ ಸ್ಕೋನ್ವೆಟರ್-ಕ್ರೇಮರ್, ಮೀಡಿಯಾಟೋಸ್ GmbH, ನ್ಯೂರೆಂಬರ್ಗನ ಲ್ಯೂಕಾಸ್ ಫರ್ಡಿನಾಂಡ್ ಬಾಲ್ತಸರ್ బಟ್ಲ೯ AWO ಒಬರ್-ಉಂಡ್ ಮಿಟ್ಟೆಲ್ಲ್ಯಾಂಕೆನನ ಎನ್ರಿಕ್ ರೋಲ್ಯಾಂಡ್ ಕಾರ್ಲ್ಟನ್ ಜಾನ್, AWO KV ನರ್ನ್ಬರ್ಗ್ ರಾಹೆಲ್ ಸ್ಕೋನ್ ಮತ್ತು ಮೀಡಿಯಾಟೋಸ್ GmbH, ನ್ಯೂರೆಂಬರ್ಗ್ ಮ್ಯಾಕ್ಸಿಮಿಲಿಯನ್ ಜಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಜರ್ಮನಿಯ ಆಸ್ಪತ್ರೆಯ ನಿರ್ದೇಶಕರು ಒಳ್ಳೆಯ ಹುದ್ದೆಗಳು, ಉತ್ತಮ ವೇತನ, ಸೇವಾ ಭದ್ರತೆ ಹಾಗೂ ಹಲವಾರು ಅವಕಾಶಗಳನ್ನು ಕಲ್ಪಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಅಲ್ಲದೇ ಬರುವ ವಿದ್ಯಾರ್ಥಿಗಳ ಸುರಕ್ಷತೆಯ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗುವುದು. ಸೇವೆಯನ್ನು ಸಲ್ಲಿಸಲು ಒಳ್ಳೆಯ ವಾತಾವರಣವನ್ನು ನಿರ್ಮಿಸಿ ಕೊಡಲಾಗುವುದು ಎಂದರು.
ಜರ್ಮನಿಯ ಆರೋಗ್ಯ ಸಂಸ್ಥೆಯಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ತಜ್ಞ ಸಿಬ್ಬಂದಿಗಳ ಅವಶ್ಯಕತೆಯಿದ್ದು, ಭಾರತದಲ್ಲಿರುವ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತಿದೆ. ರೋಗಿಗಳೊಂದಿಗೆ ಅತ್ಯಂತ ಸ್ನೇಹಯುತವಾಗಿ ವರ್ತಿಸುವ ಮನೋಭಾವವನ್ನು ಭಾರತದ ನರ್ಸಿಂಗ್ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಆದ್ದರಿಂದಲೇ ಅವರಿಗೆ ಅವಕಾಶವನ್ನು ನೀಡಲಾಗುತ್ತಿದೆ ಎಂದರು.ಡಾ. ರವಿ ಪಾಟೀಲ್ ಅವರು ಮಾತನಾಡಿ, ನರ್ಸಿಂಗ್ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಜರ್ಮನಿಗೆ ಹೋಗಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ. ಅಲ್ಲದೇ ಹೆಚ್ಚಿನ ಶಿಕ್ಷಣವನ್ನು ಕೂಡ ಪಡೆಯಬಹುದಾಗಿದೆ. ಜರ್ಮನಿಯಲ್ಲಿ ಸುಮಾರು 3 ಲಕ್ಷ ನರ್ಸಿಂಗ್ ಸಿಬ್ಬಂದಿಯ ಬೇಡಿಕೆಯಿದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಜರ್ಮಿನಿಯಿಂದ ಬಂದಿರುವ ಗಣ್ಯರು ಸಂದರ್ಶನ ನಡೆಸಿ ಆಯ್ಕೆ ಮಾಡಲಿದ್ದಾರೆ. ಬಿ ವನ್, ಬಿ ಟು, ಪರೀಕ್ಷೆ ಬರೆಯಲು ಬೆಳಗಾವಿಯಲ್ಲಿಯೇ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಮಾಡಿಕೊಡಲಾಗಿದೆ. ನಮ್ಮ ಸಂಸ್ಥೆಯಲ್ಲಿಯೇ ತರಬೇತಿ ಪಡೆದು ಪರೀಕ್ಷೆ ಎದುರಿಸಿ ಜರ್ಮಿನಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯಬಹುದು. ಜರ್ಮನಿಯಲ್ಲಿ ಸೇವೆ ಸಲ್ಲಿಸಲು ಬೇಕಾಗುವ ಅಲ್ಲಿಯ ಭಾಷೆಯನ್ನು ಕೂಡ ಕಲಿಸಲಾಗುವುದು ಎಂದರು.
ಈ ಕ್ಯಾಂಪಸ್ ಸಂದರ್ಶನ ಮತ್ತು ಪ್ಲೇಸಮೆಂಟನ ಸದುಪಯೋಗವನ್ನು ಹಲವಾರು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ.






