ಅಂಕಲಗಿ ಮಠದಲ್ಲಿ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರ
ಅಂಕಲಗಿ. ೧೪ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನ ಮಠ ಮತ್ತು ಕಂಪಾನಿಯೋ ಗಳ ಸಹಯೋಗದಲ್ಲಿ ಇದೇ ದಿನಾಂಕ ೧೭-೦೨-೨೦೨೫ ರಿಂದ ೨೮-೦೨-೨೦೨೫ ರ ವರೆಗೆ ಅಂಕಲಗಿ ಶ್ರೀ ಅಡವಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರ ಜರುಗಲಿದೆ. ಪ್ರತಿದಿನ ಮುಂಜಾನೆ ೧೦-೦೦ ರಿಂದ ಸಂಜೆ ೫-೩೦ ರ ವರೆಗೆ ಚಿಕಿತ್ಸೆ ಪಡೆಯಬಹುದಾಗಿದ್ದು, ಈ ಶಿಬಿರದಲ್ಲಿ ಮಧು ಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ,ನಿದ್ರಾಹೀನತೆ, ಪಾರ್ಶ್ವವಾಯು, ಥೈರಾಯ್ಡ್, ಬೆನ್ನು ನೋವು ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಉಚಿತ ಸಿಕಿತ್ಸೆ ಮತ್ತು ಸಲಹೆ ಪಡೆಯಬಹುದಾಗಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀ ಮಠದ ಪ್ರಕಟಣೆ ತಿಳಿಸಿದೆ.ಸುರೇಶ್ ಉರಬಿನಹಟ್ಟಿ






