ನೇತಾಜಿ ಕಂಡ ಶೋಷಣೆರಹಿತ ಸಮಾಜ ನನಸಾಗಲಿ!!!
ಇಂದು ಬೆಳಗಾವಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅದರ ಇಜಿ ನೇ ಜನ್ಮ ವಾರ್ಷಿಕ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗು ಎಐಡಿವೈಒ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಒ ರಾಜ್ಯ ಅಧ್ಯಕ್ಷರಾದ ಶರಣಪ್ಪ ಉದ್ಘಾಳ್ ಮಾತನಾಡುತ್ತಾ, "ಇಂದು ಭಾರತದಲ್ಲಿ ಯುವಕರಿಗೆ ಉನ್ನತ ವಿಚಾರಗಳ ಅವಶ್ಯಕತೆ ಇದೆ. ಮುಂದಿನ ಯುವಪೀಳಿಗೆ ಬೇರಿಲ್ಲದವರಂತಾಗುತ್ತಿದ್ದಾರೆ. ಹಾಗಾಗಿ ಇಂದಿನ ಪ್ರಸ್ತುತ ದಿನಮಾನಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂಥವರ ವಿಚಾರಗಳು ಯುವಕರಿಗೆ ಸ್ಫೂರ್ತಿಯಾಗಬೇಕಿದೆ. ಅವರ ವಿಚಾರಗಳನ್ನ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಂಡು ಅವರ ಆದರ್ಶಗಳನ್ನ ಪಾಲಿಸಿದರೆ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಾತನಾಡಿದ ಉದ್ದೇಶಿಸಿ ಎಐಡಿವೈಓ ಜಿಲ್ಲಾ ಸಂಚಾಲಕರು ರಾಜು ಗಾಣಗಿ 'ಇಂದಿನ ದೇಶದ ಪರಿಸ್ಥಿತಿಯನ್ನ ನಾವೆಲ್ಲ ಗಮನಿಸಿದಾಗ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸಾಂಸ್ಕೃತಿಕ ಅಧಃಪತನಗಳಂತಹ ಸಾಮಾಜಿಕ ಪಿಡುಗುಗಳನ್ನ ಯುವಕರು ಎದುರಿಸುತ್ತಿದ್ದಾರೆ. ಯುವಕರಿಗೆ ಆದರ್ಶವಾಗಬೇಕಾಗಿರುವಂತಹ ನೇತಾಜಿ, ಭಗತ್ ಸಿಂಗ್ ರಂತಹ ವಿಚಾರಗಳನ್ನ ಇನ್ನು ಹೆಚ್ಚು ಹೆಚ್ಚು ಯುವಕರ ಮಧ್ಯೆ ಚರ್ಚೆ ಮಾಡಲು ಇಂತಹ ಮಹಾನ್ ವ್ಯಕ್ತಿಗಳ ದಿನಗಳು ಬಂದಾಗ ಎಐಡಿವೈಒ ಯುವಜನ ಸಂಘಟನೆ ನಿರಂತರ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಇಂತ ಹೋರಾಟಗಳಲ್ಲಿ ಎಲ್ಲರೂ ಕೈಜೋಡಿಸಬೇಕು" ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಅಪ್ರಾಜಿಗೊಳ್ నరో మాకనాడి "ఇందిన యువ జనకే సామాజిక మాధ్యముగళందాగి దారి కవత్తిడి, విద్యాథికాయ జనదిగే ನಿಜವಾದ ಆದರ್ಶಗಳ ಕೊರತೆ ಎದ್ದು ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತ ಆದರ್ಶಗಳು ವಿದ್ಯಾರ್ಥಿಗಳಿಗೆ ಬಹಳ ಅವಶ್ಯಕತೆ ಇದೆ. ಅವರ ತಾತ್ವಿಕ ಮೌಲ್ಯಗಳನ್ನು ಹೋರಾಟದ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಕಿರಣ್ ಕುಮಾರ್ ಸರ್ ಕಾಠ್ಯಕ್ರಮ ನಡೆಸಿಕೊಟ್ಟರು. ವಿದ್ಯಾಧರ್ ಲಾಟ್ಕರ್ ಸರ್, ರಾಜಕುಮಾರ ಪಾಟೀಲ ಸರ್ ಅವರು ಹಾಗೂ ಎಐಡಿವೈಓ ಸಂಘಟಕಿ ರಾಧಿಕಾ ಭಜಂತ್ರಿ, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






