ಭಾರತೀಯ ಜನತಾ ಪಾರ್ಟಿ ಬೆಳಗಾವಿ*
ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾ ಕಾರ್ಯಾಲಯಕ್ಕೆ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ*
*ಬೆಳಗಾವಿ - ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ(Suresh angadi express) ಅವರ ಹೆಸರಿಡಲು ಮನವಿ*
ಬೆಳಗಾವಿ ನಗರದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸರ್ಕಾರದ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಧರ್ಮನಾಥ ಭವನದ ಹತ್ತಿರ ಇರುವ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾ ಕಾರ್ಯಾಲಯಕ್ಕೆ ಭೇಟಿ ನೀಡಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಪಕ್ಷದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು ನಂತರ ಮಾತನಾಡಿದ ಅವರು ಕಾರ್ಯಕರ್ತರೇ ಭಾ.ಜ.ಪಾ ಪಕ್ಷದ ನಿಜವಾದ ಆಧಾರ ಸ್ತಂಭ ಕಾರ್ಯಕರ್ತರ ಶಕ್ತಿಯಿಂದ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯಿತು ನಂತರ ಮಾತನಾಡಿ ಪ್ರಧಾನಿ ಮೋದಿಯವರಿಂದ ಭಾರತ ಪ್ರಗತಿಪಥದತ್ತ ಮುನ್ನುಗ್ಗುತ್ತಿದೆ ಇಂತಹ ಪ್ರಧಾನಿಯನ್ನು ಪಡೆದಿದ್ದು ನಮ್ಮೆಲ್ಲರ ಭಾಗ್ಯ ಈ ಭಾಗದ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಸದಾ ಬಧ್ದನಾಗಿದ್ದೆನೆ ಎಂದು ಹೇಳಿದರು ಇದೇ ವೇಳೆ ಭಾ.ಜ.ಪಾ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ, ಮಾಜಿ ಶಾಸಕರಾದ ಸಂಜಯ್ ಪಾಟೀಲ , ಮಲ್ಲಿಕಾರ್ಜುನ್ ಮಾದಮ್ಮನವರ ಹಾಗೂ ಪ್ರಮುಖ ಪದಾಧಿಕಾರಿಗಳು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಬೆಳಗಾವಿ - ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ ಅವರ (Suresh angadi express) ಹೆಸರಿಡಬೇಕೆಂದು ಮನವಿ ಪತ್ರ ನೀಡಿದರು. ಮನವಿ ಸ್ವೀಕರಿಸಿ ಕೇಂದ್ರ ಸಚಿವರು ಸ್ಪಂದಿಸಿ ಶೀಘ್ರದಲ್ಲೇ ಬೆಳಗಾವಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿಗೆ ದಿವಂಗತ ಸುರೇಶ್ ಅಂಗಡಿ ಅವರ ಹೆಸರಿಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೊಲಕಾರ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶನೂರ, ಮಾಧ್ಯಮ ಸಹ ಪ್ರಮುಖ ಬಾಳೇಶ ಚವ್ವನ್ನವರ,ನಯನಾ ಬಸ್ಮೆ, ಗುರುಪ್ರಸಾದ್ ಕೋತಿನ್, ಪ್ರಶಾಂತ್ ಅಮ್ಮಿನಭಾವಿ, ವಿಠ್ಠಲ ಸಾಯಣ್ಣವರ,ಮನೋಜ್ ಪಾಟೀಲ್ ಹಾಗೂ ಪ್ರಮುಖ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು






