ಬಳ್ಳಾರಿ: ಗ್ರಾಮೀಣ ಬದುಕಿನ ಸೊಗಡು, ಅಲ್ಲಿನ ಸಂಸ್ಕೃತಿ ಹಾಗೂ ಜನಜೀವನವನ್ನು ಆಧರಿಸಿದ ನೂತನ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದ್ದು, ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವ ಹೊಸ ಪ್ರತಿಭೆಗಳು ಹಾಗೂ ಬಾಲ ಕಲಾವಿದರಿಗೆ ಆಡಿಷನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ನಾಗಪ್ಪ ಮಾತನಾಡಿ, Brinda Veronika Cine Creations ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ವಿವಿಧ ವಯೋಮಾನದ ಪ್ರತಿಭಾವಂತರನ್ನು ಆಡಿಷನ್ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
6ರಿಂದ 14 ವರ್ಷದೊಳಗಿನ ಬಾಲ ಪ್ರತಿಭೆಗಳು, 18ರಿಂದ 25 ವರ್ಷದೊಳಗಿನ ಯುವಕ-ಯುವತಿಯರು ಹಾಗೂ 30ರಿಂದ 60 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಆಡಿಷನ್ನಲ್ಲಿ ಭಾಗವಹಿಸಬಹುದಾಗಿದೆ. ಚಿತ್ರದಲ್ಲಿ ನಾಯಕ, ನಾಯಕಿ, ಖಳನಾಯಕ, ಹಾಸ್ಯ ನಟರು, ಪಾತ್ರಧಾರಿಗಳು, ಮಹಿಳಾ ಪಾತ್ರಗಳು ಹಾಗೂ ಬಾಲ ಕಲಾವಿದ ಸೇರಿದಂತೆ ವಿವಿಧ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯಲಿದೆ ಎಂದರು.
ಸೆ.4ರಂದು ಆಡಿಷನ್
ಆಡಿಷನ್ ಸೆಪ್ಟೆಂಬರ್ 4ರಂದು ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಗರದ ರಾಯಲ್ ಸರ್ಕಲ್ನ ಮಯೂರ ಹೋಟೆಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಬಿಲ್ಡಿಂಗ್ನಲ್ಲಿ ನಡೆಯಲಿದೆ. ನಟನೆಯತ್ತ ಆಸಕ್ತಿ ಹೊಂದಿರುವವರು ಯಾವುದೇ ಹಿಂಜರಿಕೆಯಿಲ್ಲದೆ ಆಡಿಷನ್ನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ನಾಗಪ್ಪ ಕರೆ ನೀಡಿದರು.
ಚಿತ್ರದ ಕಥೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಹಂಪು ಎನ್. ಗೌರಿಪುರ ವಹಿಸಿಕೊಂಡಿದ್ದು, ನಾಗಪ್ಪ ನಿರ್ದೇಶನ ಮಾಡಲಿದ್ದಾರೆ. ಕೃಷ್ಣಮೂರ್ತಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಚಲನಚಿತ್ರ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಯುವ ಪ್ರತಿಭೆಗಳು ಹಾಗೂ ಬಾಲ ಕಲಾವಿದರಿಗೆ ಇದು ಉತ್ತಮ ವೇದಿಕೆಯಾಗಿದ್ದು, ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಳ್ಳುವ ಮೂಲಕ ಬೆಳ್ಳಿತೆರೆಯ ಕನಸಿನತ್ತ ಮೊದಲ ಹೆಜ್ಜೆ ಇಡಬೇಕು ಎಂದು ಚಿತ್ರತಂಡ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ:
ನಾಗರಾಜ್ – 8197055787
ಕೃಷ್ಣಮೂರ್ತಿ – 6362714219
ಸುದ್ದಿಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹಾಗೂ ಹಂಪಮ್ಮ ಉಪಸ್ಥಿತರಿದ್ದರು.







