ಬಳ್ಳಾರಿ: ಕೆ.ಆರ್.ಎಸ್. ಪಕ್ಷದ ನೂತನ ನಗರಾಧ್ಯಕ್ಷರಾಗಿ ಆಯ್ಕೆಯಾದ ವೀರೇಶ್ ಅವಂಬಾವಿ ಅವರನ್ನು ಸಿ.ಜಿ.ಆರ್. ಗ್ರೂಪ್ ವತಿಯಿಂದ ಅಭಿನಂದಿಸಿ, ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡ ಮಾದವರಡ್ಡಿ , ಅಂಜನ ರೆಡ್ಡಿ, ಕಿಶೋರ್ ಕುಮಾರ್, ವೆಂಕಟೇಶ್ ರೆಡ್ಡಿ, ಸಂಜು ರೆಡ್ಡಿ, ಮಲ್ಲಿಕಾರ್ಜುನ, ನಾಗರಾಜ, ಹುಲುಗಪ್ಪ, ರಾಮಯ್ಯ, ಬಸವರಾಜು, ರವಿಕಾಂತ್ ಹಾಗೂ ವಿಜಯ್ ಕುಮಾರ್ ಉಪಸ್ಥಿತರಿದ್ದರು.
ನೂತನ ನಗರಾಧ್ಯಕ್ಷರಾಗಿ ಆಯ್ಕೆಯಾಗಿರುವ ವೀರೇಶ್ ಅವಂಬಾವಿ ಅವರು ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ ಎಂದು ಸಿ.ಜಿ.ಆರ್. ಗ್ರೂಪ್ ಸದಸ್ಯರು ಶುಭ ಹಾರೈಸಿದರು.







